testimonials

ನಾನು ಈ ಸಂಸ್ಥೆಗೆ ಬಂದು 15 ವರ್ಷಗಳಾಯಿತು. ತುಂಬಾ ಕಷ್ಟವಾಗಿದ್ದ ನನ್ನ ಜೀವನವು ಇಲ್ಲಿಗೆ ಬಂದ ಮೇಲೆ ಸುಗಮವಾಯಿತು. ನಾನು ತುಂಬಾ ದಿನಗಳಿಂದ ಕಳೆದುಕೊಂಡಿದ್ದ ನನ್ನವರ ಪ್ರೀತಿಯು ಇಲ್ಲಿಯ ಭಗಿನಿಯರ ಸಹಾಯದಿಂದ ಮರಳಿ ದೊರಕಿತು. ಇಲ್ಲಿಯ ಭಗಿನಿಯರು ನನ್ನ ಓದಿಗೆ ಸಹಾಯ ಮಾಡಿ, ನನಗೆ ಒಂದು ಸುಂದರ ಜೀವನವನ್ನು ಕೊಟ್ಟರು. ನಾನು ಕಳೆದುಕೊಂಡಿದ್ದ ನನ್ನ ಬಾಲ್ಯದ ನನ್ನ ಸುಂದರ ಕ್ಷಣಗಳನ್ನು ಮರಳಿ ಕೊಟ್ಟರು. ಒಳ್ಳೆಯ ಮೌಲ್ಯಗಳನ್ನು, ಒಳ್ಳೆಯ ರೀತಿ ನೀತಿಗಳನ್ನು ಕಲಿಸಿಕೊಟ್ಟು, ನನಗೆ ಒಂದು ಮೌಲ್ಯಭರಿತ ಜೀವನವನ್ನು ಕಲ್ಪಿಸಿಕೊಟ್ಟರು.
ನಾನು ಜೀವದಾನ್ ಸಂಸ್ಥೆಗೆ ಬಂದು 2 ವರ್ಷ ಆಯಿತು. ನಾನು ಇಲ್ಲಿಗೆ ಬರುವಾಗ ಆನಾರೋಗ್ಯದಿಂದ ಇದ್ದೆ ಅಪೌಷ್ಟಿಕತೆಯಿಂದ ನನಗೆ ನಡೆಯಲು ಶಕ್ತಿಯು ಇರಲಿಲ್ಲ. ನಾನು
ಇಲ್ಲಿಗೆ ಬಂದ ಮೇಲೆ ಇಲ್ಲಿನ ಸಿಸ್ಟರ್ಸ್ ಆಸ್ಪತ್ರೆಗೆ ಸೇರಿಸಿದ್ರು . ನನಗೆ ಇಲ್ಲಿನ ಸಿಸ್ಟರ್ಸ್ ಆಂಟಿನವರು ಮತ್ತು ಮಕ್ಕಳೊಟ್ಟಿಗೆ ತುಂಬಾ ಸಂತೋಷವಾಯಿತು. ನಂತರ ಈ ಸಂಸ್ಥೆಯಲ್ಲಿ ನಾನು ಮತ್ತೆ ಎಲ್ಲರೂ ಸೇರಿ ಹಬ್ಬವನ್ನು ಆಚರಿಸಿದೆವು. ನನಗೆ ಇಲ್ಲಿ ಇರಲು ತುಂಬಾ ಸಂತೋಷ ವಾಗುತ್ತದೆ. ಮೋದಲು ನಾನು ಇಲ್ಲಿಗೆ ಬರುವಾಗ ಅಯ್ಯೋ ನಾನು ಒಬ್ಬಳೆ ಎಂಬ ಅನುಭವ ಆಯಿತು ನಂತರ ಇಲ್ಲಿಂದ ಬಿಟ್ಟು ಹೋಗುವ ಮನಸ್ಸೆ ಬರಲಿಲ್ಲ. ನಾನು ಇಲ್ಲಿಗೆ ಬರುವ ಮುಂಚೆ ನನಗೆ ಯಾವುದರಲ್ಲೂ ಆಸಕ್ತಿ ಇರಲಿಲ್ಲ ಆದರೆ ಇಲ್ಲಿಗೆ ಯಾವಗ ನಾನು ಬಂದೆನೋ ನನಗೆ ನನ್ನ ಎಲ್ಲ ಹವ್ಯಾಸಗಳು ಹೊರಗೆ ಬಂದವು ನನಗೆ ಅವಕಾಶ ಸಿಕ್ಕಿದವು ಆದ್ದರಿಂದ ನಾನು ಈ 2 ವರ್ಷದಲ್ಲಿ ನನಗೆ ತುಂಬಾ ತುಂಬಾ ಅನುಭವ ಆಯಿತು.

ನಾನು ಇಲ್ಲಿಗೆ 2004 ರಲ್ಲಿ ಈ ಸಂಸ್ಥೆಗೆ ಬಂದೆ. ನಾನು ಮತ್ತು ಸಣ್ಣ ಸಣ್ಣ 3 ಮಕ್ಕಳನ್ನು ಇಲ್ಲಿಗೆ ಕರೆತಂದೆ. ಆಮೇಲೆ ನಾನು ಅನಾರೋಗ್ಯದಿಂದ ಇಲ್ಲಿ ಬಿದ್ದಾಗ ನನ್ನನ್ನು ಇಲ್ಲಿನ ಸಿಸ್ಟರ್ಸ್ ನವರು ತುಂಬಾ ಚಂದ ಮಾಡಿ ನೋಡಿದ್ರು ಮತ್ತು ನನ್ನ ಮೂರು ಹೆಣ್ಣು ಮಕ್ಕಳನ್ನು ಇಲ್ಲಿ ಸಿಸ್ಟರ್ಸ್ ನವರ ಶಾಲೆಗೆ ಹಾಕಿ ಅವರ ವಿದ್ಯಾಭ್ಯಾಸ ವನ್ನು ಅವರೇ ನೋಡಿಕೊಂಡರು. ನಂತರ ಅವರೆ ಕೆಲಸವನ್ನು ಒದಗಿಸಿ ಮಕ್ಕಳ ಭವಿಷ್ಯ ನೋಡಿಕೊಂಡರು. ನಾನು ಇಲ್ಲಿಗೆ ಬಂದ ಮೇಲೆ ಚೆನ್ನಾಗಿ ಇದ್ದೆನೆ ನನ್ನನ್ನು ಮತ್ತು ನನ್ನ ಮಕ್ಕಳನ್ನು
ತುಂಬಾ ಚಂದಮಾಡಿನೋಡಿದ್ದರೆ ಹಾಗೆ ನಾನು ಇಲ್ಲಿ ತುಂಬಾ ಸಂತೋಷವಾಗಿದ್ದೇನೆ ನನ್ನ ಮನೆಯವರು ನನ್ನನು ಒಳ್ಳೆಯ ರೀತಿಯಲ್ಲಿ ನೋಡಲಿಲ್ಲ ಆದರೆ ಇಲ್ಲಿನ ಸಿಸ್ಟರ್ಸ್ ನವರು ಒಳ್ಳೆಯರೀತಿಯಲ್ಲಿ ನೋಡಿದ್ದಾರೆ.

ನಾನು ಇಲ್ಲಿಗೆ 2007 ರಲ್ಲಿ ಬಂದೆ ನನಗೆ ಖಾಯಿಲೆ ಅಂತ ಗೊತ್ತಾದಾಗ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ನೊಂದು ಬಂದಾಗ ಈ ಸಂಸ್ಥೆಯ ಸಿಸ್ಟರ್ಸ್ ನವರು ಸಂತೋಷ ಸಮಾಧಾನವನ್ನು ತಿಳಿಸಿರುತ್ತಾರೆ. ನಮ್ಮನ್ನು ನಮ್ಮ ಮನೆಯರು ಪ್ರೀತಿಯಿಂದ ನೋಡದಿದ್ದರು ಇಲ್ಲಿನ ಸಿಸ್ಟರ್ಸ್ ನವರು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಹಾಗೂ ಇಲ್ಲಿನ ಊಟಕ್ಕೆ ಹಾಗೂ ದಿನನಿತ್ಯದ ಔಷಧಿ ಉಪಚಾರಕ್ಕೆ ಏನು ಕಮ್ಮಿ ಆಗದೆ ನಮ್ಮನ್ನು ಸಂತೋಷ ಪಡಿಸಲು ನಮ್ಮನ್ನು ಹೊರಗಡೆ ಕರೆದುಕೊಂಡು ಹೊಗುತ್ತಾರೆ. ನಮಗೆ ಎಲ್ಲರ ಜೊತೆ ಇರಲು ಸಂತೋಷವಾಗುತ್ತಿದೆ. ಈ ಸಮಯದಲ್ಲಿ ನಾನು ದೇವರಿಗೆ ಮತ್ತು ಸಿಸ್ಟರ್ಸ್ ನವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ.

ನಾನು ಇಲ್ಲಿಗೆ ಬಂದು 12 ವರ್ಷ ಆಯಿತು. ನನಗೆ ಇಲ್ಲಿ ತುಂಬಾ ಖುಷಿ ಆಗುತ್ತಿದೆ. ಇಲ್ಲಿ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ನಮಗೆ ಉತ್ತಮ ಆಹಾರ ಕೊಡುತ್ತಾರೆ. ಇಲ್ಲಿ ನಮಗೆ ಬೇಕಾದ ವಸ್ತುಗಳನ್ನು ಕೊಡುತ್ತಾರೆ. ನಮಗೆ ಇಲ್ಲಿ ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕೊಡುತ್ತಾರೆ. ನಾನು ಮೊದಲ ಸಲ ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಹಿಂಜರಿಯುತ್ತಿದೆ ಆಗ ಇಲ್ಲಿ ಇರುವವರು ನನಗೆ ಪ್ರೋತ್ಸಹ ಕೊಟ್ಟು ನನ್ನನ್ನು ಮುಂದೆ ಸಾಗಿಸಿದರು. ಇಲ್ಲಿ ಇರುವ ಎಲ್ಲರು ನನಗೆ ಸಹಾಯ ಮಾಡುತ್ತಾರೆ. ನನಗೆ ಇಲ್ಲಿ ಸಿಗುವ ಸಂತೋಷ ಮನೆಯಲ್ಲಿ ಸಿಗುತಿತ್ತಾ ಗೊತ್ತಿಲ್ಲ ನನಗೆ ತಂದೆ ತಾಯಿ ಇಲ್ಲದ ಯೋಚನೆ ನನಗೆ ಈ ಸಂಸ್ಥೆಯಲ್ಲಿ ಗೊತ್ತಾಗುತಿರಲಿಲ್ಲ. ನನಗೆ ತಂದೆತಾಯಿಯ ಪ್ರೀತಿ ಸಿಸ್ಟರ್ಸ್, ಆಂಟಿಯಂದಿರು ಮತ್ತು ಇಲ್ಲಿರುವ ಮಕ್ಕಳು ಕೋಡುತ್ತಾರೆ ನನ್ನ ವಿಧ್ಯಾಭ್ಯಾಸವನ್ನು ಇಲ್ಲಿ ನಡೆಸುತಿದ್ದೇನೆ ನಾನು ಇಲ್ಲಿ ಇರಲು ತುಂಬಾ ಇಷ್ಟ ಪಡುತ್ತೇನೆ ನನ್ನನ್ನು ನೋಡಿಕೊಳ್ಳುತ್ತಿರುವ ಎಲ್ಲಾ ಸಿಸ್ಟರ್ಸ್ ನವರಿಗೆ ಧನ್ಯಾದ ಹೇಳಲು ಬಯಸುತ್ತೇನೆ.

ನಾನು ಇಲ್ಲಿಗೆ ಬಂದು 14 ವರ್ಷ ಆಯಿತು ನಾನು ನನ್ನ ತಂಗಿ ಮತ್ತು ನನ್ನ ಅಮ್ಮ ಒಟ್ಟಿಗೆ ಇಲ್ಲಿಗೆ ಬಂದೆವು. ಮನೆಯವರು ನನ್ನನ್ನು ನೋಡಲಿಲ್ಲ ಎಂಬ ಬೇಜಾರು ಇತ್ತು, ಆದರೆ ಇಲ್ಲಿ ಬರುವಾಗ ತುಂಬಾ ಸಂತೋಷ ವಾಯಿತು. ನನ್ನ ತಂಗಿ ಅನಾರೀಗ್ಯದಿಂದ ಇದ್ದಳು ಆವಾಗ ನನ್ನ ಮನೆಯವರು ಅವಳನ್ನು ನೋಡಲು ಬರಲಿಲ್ಲ ತುಂಬಾ ಬೇಸರವಾಯಿತು, ನಮಗೆ ಮನೆಯವರ ಪ್ರೀತಿ ಬೇಕೆಂದು ಎನಿಸುತ್ತಿತ್ತು. ಮನೆಯವರಿಗೆ ನಾವು ಬೇಡವಾದರು, ಇಲ್ಲಿನ ಸಿಸ್ಟರ್ಸ್ ನವರಿಗೆ ಇಲ್ಲಿನ ಪ್ರೀತಿಯನ್ನು ಕೊಟ್ಟು ನಮ್ಮನ್ನು ಅವರ ಮನೆಯವರಾಗೆ ನೋಡಿಕೊಂಡಿದ್ದಾರೆ. ನಂತರ ನನ್ನ ವಿಧ್ಯಾಭ್ಯಾಸವನ್ನು ಅವರೇ ನೋಡಿಕೊಂಡು ನನ್ನ ಭವಿಷ್ಯವನ್ನು ಒಳ್ಳೆಯ ರೀತಿಯಲ್ಲಿ ನೋಡಿದ್ದಾರೆ, ಹಾಗೂ ಮುಂದಿನ ವಿಧ್ಯಾಭ್ಯಾಸವನ್ನು ಅವರೇ ನೋಡಿಕೊಂಡು ನನಗೆ ಒಂದು ಒಳ್ಳೆಯ ಜೀವನವನ್ನು ಕೊಟ್ಟಿದ್ದಾರೆ. ನಾನು ಇಲ್ಲಿನ ಭಗಿನಿಯರಿಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ.

ನಾನು ಇಲ್ಲಿಗೆ 2014 ರಂದು ಬಂದೆ. ನನಗೆ ಫುಲ್ ಸೈಡ್ ಎಫೆಕ್ಟ್ ಆಗಿತ್ತು. 6 ತಿಂಗಳಿನಲ್ಲಿ ನಾನು ಚಿಕಿತ್ಸೆ ಪಡೆದು ಹುಷಾರಾಗಿ ಪುನಃ ಮನೆಗೆ ಮರಳಿ ಹೋಗಿ 2 ಮಕ್ಕಳಿಗೆ ಮದುವೆ ಮಾಡಿದೆ. ನಂತರ ನನ್ನ ತಾಯಿ ತೀರಿಕೊಂಡರು ಮನೆಯಲ್ಲಿ ಒಬ್ಬಳೆ ಇದ್ದೆ ಆಗ ನಾನು ಪುನಃ ಆನಾರೋಗ್ಯದಿಂದ ಬಿಳತ್ತೇನೋ ಎಂಬ ಭಯದಲ್ಲಿ ಪುನಃ ಹಿಂತಿರುಗಿ ಈ ಸಂಸ್ಥೆಗೆ ಬಂದೆ. ಇಲ್ಲಿಗೆ ಬಂದ ಮೇಲೆ ನನಗೆ ತುಂಬಾ ಸಂತೋಷವಾಯಿತು. ಇಲ್ಲಿನ ಸಿಸ್ಟರ್ಸ್ ನವರ ಪ್ರೀತಿ ಹಾಗೂ ಇಲ್ಲಿ ನಮಗೆ ಬೇಕಾದ ವಸ್ತುಗಳನ್ನು ಮತ್ತು ಎಲ್ಲರಿಗೂ ಸಹಾಯ ಮಾಡಿಕೊಂಡು ಎಲ್ಲರೊಟ್ಟಿಗೆ ಪ್ರೀತಿಯಿಂದ ಇದ್ದೆನೆ ಮನೆಗೆ ಹೋಗಿ ಬಂದುಕೊಂಡು ಇರುತ್ತೇನೆ. ನನಗೆ ತುಂಬಾ ಸಂತೋಷವಾಗುತ್ತದೆ ಮತ್ತು ನಾನು ಇಲ್ಲಿ ನನ್ನ
ಅನುಭವವನ್ನು ತಿಳಿಸಿದ್ದೆನೆ ಮನೆಯವರೆಲ್ಲ ನನ್ನನ್ನು ವಿರೋದ್ದಿಸಿದ್ರು ಆದ್ರೆ ಇಲ್ಲಿ ನನಗೆ ಮನೆಯವರ ಪ್ರೀತಿ ಸಿಕ್ಕಿದೆ.

ನಾನು ಜೀವದಾನಕ್ಕೆ ಬಂದು 15 ವರ್ಷಗಳಾಯಿತು. ನನ್ನ ಜೀವನವು ಇಲ್ಲಿಗೆ ಬರುವ ಮೊದಲು ತುಂಬಾ ಕಷ್ಟಕರವಾಗಿತ್ತು. ಆದರೆ ಇಲ್ಲಿಗೆ ಬಂದ ಮೇಲೆ ನನ್ನ ಜೀವನ ಮತ್ತು ಜೀವನ ಶೈಲಿಯು ಬದಲಾಯಿತು. ಮೋದಲು ನನಗೆ ಕೆಲಸ ಮಾಡಲು ಕಷ್ಟವಾಗುತ್ತಿತ್ತು. ನಂತರ ಇಲ್ಲಿನ ಭಗಿನಿಯರ ಪ್ರೀತಿ, ಕಾಳಜಿಯಿಂದ ನನ್ನ ಬೆಳವಣಿಗೆಯು ಸುಗಮವಾಯಿತು. ನಾನು ಕಳೆದುಕೊಂಡಿದ್ದ ಪ್ರೀತಿಯು ನನ್ನ ಬಳಿಗೆ ಮರಳಿ ಬಂತು. ನಾನು ಈಗ ತುಂಬಾ ಖುಷಿಯಾಗಿದ್ದೇನೆ.

ನಾಣು ಜೀವದಾನಕ್ಕೆ ಬಂದು 9 ವರ್ಷಗಳಾಯಿತು. ಮನೆಯಲ್ಲಿ ತುಂಬಾ ಕಷ್ಟಕರವಾಗಿದ್ದ ಜೀವನವು ನನ್ನದಾಗಿತ್ತು ಒಂದು ಹೋತ್ತಿನ ಊಟಕ್ಕೆ ನಮಗೆ ಗತಿಯಿರಲಿಲ್ಲ. ನನ್ನ ತಂದೆಯ ಕುಡಿತದಿಂದ ನಮಗೆ ಶಾಲೆಗೆ ಹೋಗುವಂತಹ ಅವಕಾಶವಿರಲಿಲ್ಲ. ತಂದೆಯ ಆದಾಯವು ಕುಡಿತಕ್ಕೆ ವ್ಯಯವಾಗಿ ಹೋಗುತ್ತಿತ್ತು. ಆ ಸಮಯದಲ್ಲಿ ಫಾದರಿನ ಸಹಾಯದಿಂದ ನಾನು ಮತ್ತು ನನ್ನ ತಂಗಿ ಇಲ್ಲಿಗೆ ಬಂದೆವು. ತುಂಬಾ ಚಿಕ್ಕದಾಗಿದ್ದ ನಮ್ಮನ್ನು ಇಲ್ಲಿಯ ಸಿಸ್ಟರ್ಸ್ ನವರು, ಆಂಟಿನವರು ತುಂಬಾ ಪ್ರೀತಿಯಿಂದ ಬೆಳೆಸಿದರು. ನಾನು ಕಳೆದುಕೊಂಡಿದ್ದ ಸಂತೋಷವು ಮರಳಿ ಸಿಕ್ಕಿತ್ತು. ನಾನು ಯಾವುದೇ ತೊಂದರೆಯಿಲ್ಲದೆ ತುಂಬಾ ಖುಷಿಯಾಗಿದ್ದೇನೆ.